Coorgcitizen

ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ಕೂಡಿಗೆಯಲ್ಲಿ ಹಮ್ಮಿಕೊಂಡಿದ್ದ ಗ್ರಾಪಂ ಸದಸ್ಯರಿಗೆ ಅಭಿನಂದನಾ ಸಮಾರಂಭದಲ್ಲಿ ಕೆಲವು ಮುಖಂಡರು ತಮ್ಮ ಅಸಮಾಧಾನ ಹೊರಹಾಕಿದ ಘಟನೆ ನಡೆಯಿತು.
ವೇದಿಕೆ ಅಲಂಕರಿಸಿದ್ದ ರಾಜ್ಯ ಕಾರ್ಮಿಕ ಘಟಕದ ಕಾರ್ಯದರ್ಶಿ ಅಜ್ಜಳ್ಳಿ ರವಿ ಅವರನ್ನು ವೇದಿಕೆಯಿಂದ ಕೆಳಗಿಳಿಸಬೇಕೆಂದು ಕೆಲವು ಮುಖಂಡರು ಒತ್ತಾಯಿಸಿದರು. ಗ್ರಾಪಂ ಚುನಾವಣೆ ಸಂದರ್ಭ ಅಜ್ಜಳ್ಳಿ ರವಿ ಅವರು ಹಿರಿಯ ಕಾಂಗ್ರೆಸಿಗರಿಗೆ ಟಿಕೇಟ್ ನೀಡದೆ ತೀವ್ರ ತಾರತಮ್ಯ ಎಸಗಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂದು ಕೂಡಿಗೆ ಗ್ರಾಪಂ ಸದಸ್ಯ ಟಿ.ಪಿ.ಹಮೀದ್, ಬ್ಯಾಡಗೊಟ್ಟದ ಬಿ.ಜೆ.ಅಣ್ಣಯ್ಯ, ಗುಡ್ಡೆಹೊಸೂರು ವಲಯ ಅಧ್ಯಕ್ಷ ಭೀಮಯ್ಯ ಮತ್ತು ಕಾರ್ಯಕರ್ತರು ಆರೋಪಿಸಿದರು. ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರ ಮುಂದೆ ಸಮಸ್ಯೆಗಳ ಸರಿಮಳೆಗೈದರು. ಈ ನಡುವೆ ಕೆಲವರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಗೊಂದಲಗಿಂದ ಕೆಲವು ಕಾರ್ಯಕರ್ತರು ಸಭೆಯಿಂದ ಹೊರನಡೆದರೆ ಮಾಜಿ ಸಚಿವ ಜೀವಿಜಯ ಮತ್ತು ಮುಖಂಡರು ಕಾರ್ಯಕರ್ತರನ್ನು ಸಮಾಧಾನಿಸಿದ ಬಳಿಕ ಸಭೆ ಆರಂಭವಾಯಿತು.

Open chat