Coorgcitizen

ಕೂಡಿಗೆಯ ಅಂಬೇಡ್ಕರ್ ಯುವಕ ಸಂಘ  ಮತ್ತು ಶೈನಿಂಗ್ ಸ್ಟಾರ್ ಯುವಕ ಸಂಘಗಳ ವತಿಯಿಂದ ಪ್ರಥಮ ವರ್ಷದ ಹೊನಲು ಬೆಳಕಿನ ಜೈಭೀಮ್ ಕಪ್ ವಾಲಿಬಾಲ್ ಪಂದ್ಯಾವಳಿ ಕೂಡಿಗೆಯ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಿತು.

ಸೋಮವಾರಪೇಟೆ ತಾಲ್ಲೂಕು ದೈಹಿಕ ಶಿಕ್ಷಣದ ಅಧೀಕ್ಷಕರಾದ ಡಾ.ಸದಾಶಿವ ಎಸ್ ಪಲ್ಲೇದ್ ಪಂದ್ಯಾಟದ ಉದ್ಘಾಟನೆಯನ್ನು ನೆರವೇರಿಸಿದರು. ನಂತರ ಮಾತನಾಡಿದ ಅವರು, ಗ್ರಾಮಾಂತರ ಪ್ರದೇಶಗಳಲ್ಲಿ ಕ್ರೀಡಾಕೂಟಗಳು ನಡೆಯುವುದರಿಂದ ಆರೋಗ್ಯ ವೃದ್ಧಿಸುವುದರ ಜೊತೆಗೆ ಗ್ರಾಮದ ಯುವಕರಲ್ಲಿ ಸ್ನೇಹ ಸಂಬಂಧಗಳು ವೃದ್ದಿಸುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೂಡಿಗೆ ಗ್ರಾಮ ಪಂಚಾಯ್ತಿ ನೂತನ ಸದಸ್ಯ ಅರುಣ್‌ರಾವ್ ಕ್ರೀಡಾ ಪಟುಗಳನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಪಂಚಾಯ್ತಿ ಸದಸ್ಯೆ ಮಂಗಳ ಪ್ರಕಾಶ್, ಸಹಕಾರ ಸಂಘದ ನಿರ್ದೇಶಕ ತಮ್ಮಣ್ಣೇಗೌಡ, ಗುತ್ತಿಗೆದಾರ ಚಂದ್ರು, ಗೋವಿಂದರಾಜ್, ಕಿಟ್ಟಿ(ಕೃಷ್ಣ), ರಾಮಚಂದ್ರ,  ಮುಳ್ಳುಸೋಗೆ ಗ್ರಾಮ ಪಂಚಾಯ್ತಿ ಸದಸ್ಯ ಮಣಿಕುಮಾರ್,  ಯುವಕ ಸಂಘ ಅಧ್ಯಕ್ಷ ಶರತ್, ಕಾರ್ಯದರ್ಶಿ ಸುದರ್ಶನ, ಸಚಿನ್ ಸೇರಿದಂತೆ ಸಮಿತಿಯ ಸರ್ವ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.

ಪಂದ್ಯಾವಳಿಯಲ್ಲಿ ಕುಶಾಲನಗರ ಹೋಬಳಿ ವ್ಯಾಪ್ತಿಯ ೧೦ ತಂಡಗಳು ಭಾಗವಹಿಸಿದ್ದವು. ಪಿಆರ್ ಫ್ರೆಂಡ್ಸ್ ತಂಡ ಪ್ರಥಮ, ಜೈಭೀಮ್ ತಂಡ ದ್ವಿತೀಯ ತೃತೀಯ ಸ್ಥಾನವನ್ನು ಕೂಡುಮಂಗಳೂರು ತಂಡ ಪಡೆದುಕೊಂಡಿತು.

Open chat