Coorgcitizen

ಕುಶಾಲನಗರ ಕಾವೇರಿ ಸೇತುವೆ ಸಮೀಪ ನೇಣು ಬಿದಿಗ ಸ್ಥಿತಿಯಲ್ಲಿ ಪುರುಷನೊಬ್ಬನ ಮೃತದೇಹ ಪತ್ತೆಯಾಗಿದೆ. ಕಳೆದ ಮರ‍್ನಾಲ್ಕು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು ಸೇತುವೆ ತಟದ ಸ್ಮಶಾನದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದೆ. ಮೃತನ ಜೇಬಿನಲ್ಲಿದ್ದ ಗುರುತಿನ ಚೀಟಿ ಪರಿಶೀಲನೆ ನಡೆಸಿದ ಸಂದರ್ಭ ಹಾಸನ ಜಿಲ್ಲೆಯ ಬೇಲೂರಿನ ಚಿಕ್ಕಬಿಕ್ಕೋಡು ಗ್ರಾಮದ ಮೂವತ್ತಮೂರು ವರ್ಷದ ಭೈರಯ್ಯ ಎಂಬವರ ಪುತ್ರ ಮಹೇಶ್ ಎಂದು ವಿಳಾಸ ಪತ್ತೆಯಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬೈಲುಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Open chat