Coorgcitizen

ಗುಡ್ಡೆಹೊಸೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊಸಕಾಡು ಮೂಲಕ ಹಾದುಹೋಗಿರುವ ಚಿಕ್ಲಿಹೊಳೆ ನಾಲೆ ಮತ್ತು ನಾಲೆಯ ಏರಿಯನ್ನು ಅತಿಕ್ರಮಿಸಿಕೊಂಡು ಬೇಲಿ ಹಾಕಿಕೊಂಡಿರುವ ವ್ಯಕ್ತಿಯ ವಿರುದ್ದ ಕ್ರಮ ಜರುಗಿಸಬೇಕು ಮತ್ತು ಕೂಡಲೇ ಬೇಲಿಯನ್ನು ತೆರವುಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಗ್ರಾಮಸ್ಥರ ಪರವಾಗಿ ಮಾಹಿತಿ ನೀಡಿದ ಆದಿವಾಸಿಗಳ ಸಂಘದ ಕೊಡಗು ಜಿಲ್ಲಾಧ್ಯಕ್ಷ ಪ್ರಕಾಶ್, ಸೋಲಿಗರ ಸಂಘದ ಅಧ್ಯಕ್ಷ ಕುಮಾರ್ ಮತ್ತಿತರರು, ಹೊಸಕಾಡು ಗ್ರಾಮದ ಸುಶೀಲ ಎಂಬವರಿಗೆ ಸೇರಿದ ಎರಡು ಎಕರೆ ಜಾಗದಲ್ಲಿ ಚಿಕ್ಲಿಹೊಳೆ ನಾಲೆ ಸಾಗಿದೆ. ಆದರೆ ಈ ಜಾಗದಲ್ಲಿ ಮರಗೆಣಸು ಬೆಳೆದಿರುವ ಕೇರಳ ಮೂಲದ ಚಾತು ಎಂಬಾತ ನಾಲೆ ಹಾಗು ನಾಲೆಯ ಏರಿಯನ್ನು ಒತ್ತುವರಿ ಮಾಡಿ ತಂತಿ ಬೇಲಿ ಹಾಕಿದ್ದಾನೆ. ಈ ಬಗ್ಗೆ ನೀರಾವರಿ ಅಧಿಕಾರಿಗಳಿಗೆ ದೂರು ನೀಡಿ ತಿಂಗಳು ಕಳೆದರೂ ಕೂಡ ಯಾವುದೇ ಕ್ರಮ ಜರುಗಿಸಿಲ್ಲ. ಆದ್ದರಿಂದ ಕೂಡಲೇ ಸಂಬಂಧಿತ ಇಲಾಖೆ ಅಧಿಕಾರಿಗಳು ಒಂದು ವಾರದೊಳಗೆ ಬೇಲಿ ತೆರವು ಮಾಡದಿದ್ದಲ್ಲಿ ಗ್ರಾಮಸ್ಥರಾದ ನಾವುಗಳೇ ಬೇಲಿಯನ್ನು ಕಿತ್ತೆಸೆಯಬೇಕಾಗುತ್ತದೆ. ಮುಂದಾಗುವ ಅವಘಡಗಳಿಗೆ ಇಲಾಖೆ ಹಾಗು ಸ್ಥಳೀಯ ಗ್ರಾಮ ಪಂಚಾಯ್ತಿ ಅಧಿಕಾರಿಗಳೇ ಕಾರಣರಾಗಬೇಕಾಗುತ್ತದೆ ಎಂದು ಪ್ರಕಾಶ್ ಹಾಗು ಕುಮಾರ್ ಎಚ್ಚರಿಸಿದರು.
ಈ ಸಂದರ್ಭ ಬಸವನಹಳ್ಳಿ ಲ್ಯಾಂಪ್ಸ್ ಅಧ್ಯಕ್ಷ ಆರ್.ಕೆ.ಚಂದ್ರು, ಗ್ರಾಮಸ್ಥರಾದ ಚಂದ್ರು, ಪ್ರತಾಪ್, ನವೀನ ಮೊದಲಾದವರಿದ್ದರು.

Open chat