Coorgcitizen

ಕುಶಾಲನಗರ ತಾಲೂಕು ರಚನೆಯಲ್ಲಿ ಶಾಸಕ ಅಪ್ಪಚ್ಚುರಂಜನ್ ಅವರ ಪ್ರಯತ್ನವನ್ನು ಕಡೆಗಣಿಸಲಾಗಿದೆ ಎಂದು ಬಿಜೆಪಿ ಸೋಮವಾರಪೇಟೆ ತಾಲೂಕು ವಕ್ತಾರ ಕೆ.ಜಿ ಮನು ಆರೋಪಿಸಿದ್ದಾರೆ.
ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಶಾಲನಗರ ನೂತನ ತಾಲೂಕಾಗುವಲ್ಲಿ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ ಅಪ್ಪಚ್ಚುರಂಜನ್ ಅವರ ಪಾತ್ರ ಅಪಾರವಿದೆ. ಆದರೆ ಇದೀಗ ತಾಲೂಕು ಹೋರಾಟ ಸಮಿತಿ ಪ್ರಮುಖರು ಹಾಗೂ ಕೆಲವು ಕಾಂಗ್ರೆಸ್ ಮುಖಂಡರು ಅಪ್ಪಚ್ಚುರಂಜನ್ ಅವರ ಪ್ರಯತ್ನ ಮರೆಮಾಚುವ ತಮ್ಮದೇ ಸಾಧನೆ ಎಂಬAತೆ ಬಿಂಬಿಸುತ್ತಿದ್ದಾರೆ. ಪಕ್ಷಾತೀತ ಹೋರಾಟದ ಮೂಲಕ ತಾಲೂಕು ರಚನೆಯಾಗಿದೆ ಹೊರತು ಯಾವುದೇ ಒಂದು ಸಂಘಟನೆ ಅಥವಾ ಕೆಲವು ವ್ಯಕ್ತಿಗಳಿಂದ ಮಾತ್ರ ಅಲ್ಲ ಎಂದು ತಿಳಿಸಿದರು.
ತಾಲೂಕು ರಚನೆಗೆ ಹಿಂದಿನ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮತ್ತು ಪ್ರಸಕ್ತ ಬಿಜೆಪಿ ಸರ್ಕಾರ ಪ್ರಮುಖ ಕಾರಣ. ರಾಜಕೀಯ ಅಸ್ತಿತ್ವ ಕಳೆದುಕೊಂಡಿರುವ ಕಾಂಗ್ರೆಸ್‌ನ ವಿ.ಪಿ ಶಶಿಧರ್ ಮತ್ತು ಜಿಲ್ಲಾ ಪಂಚಾಯ್ತಿ ಸದಸ್ಯೆ ಕೆ.ಪಿ ಚಂದ್ರಕಲಾ ತಾಲೂಕು ರಚನೆ ವಿಚಾರದಲ್ಲಿ ಅನಗತ್ಯ ರಾಜಕೀಯ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಕೂಡಾ ಅಧ್ಯಕ್ಷ ಎಂ.ಎA ಚರಣ್ ಮತ್ತು ನಗರ ಬಿಜೆಪಿ ಅಧ್ಯಕ್ಷ ಉಮಾಶಂಕರ್ ಮಾತನಾಡಿ, ನಿಜವಾದ ಮಾಹಿತಿಗಳನ್ನು ಮರೆಮಾಚಿ ಸಾಧನೆಗಳನ್ನು ತಮ್ಮದೆಂದು ಬಿಂಬಿಸಿಕೊಳ್ಳುವುದು ಸರಿಯಲ್ಲ. ತಪ್ಪು ಮಾಹಿತಿ ನೀಡಿ ಕ್ಷೇತ್ರದ ಶಾಸಕರಿಗೆ ಅವಮಾನ ಮಾಡಿದಲ್ಲಿ ಜನತೆಗೆ ಅವಮಾನ ಮಾಡಿದಂತೆ ಎಂದರು.
ಗೋಷ್ಠಿಯಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಜೈವರ್ಧನ್, ಬಿಜೆಪಿ ಪ್ರಮುಖರಾದ ಎಂ.ಡಿ ಕೃಷ್ಣಪ್ಪ, ಕೆ.ಡಿ.ಪ್ರಶಾಂತ್, ಪ್ರವೀಣ್ ಮತ್ತಿತರರು ಗೋಷ್ಠಿಯಲ್ಲಿದ್ದರು.

Open chat