Coorgcitizen

ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಕೂಡಿಗೆಯ ಕ್ರೀಡಾ ಶಾಲೆಗೆ ದಿಢೀರನೆ ಭೇಟಿ ನೀಡಿ ನೂತನವಾಗಿ ನಿರ್ಮಾಣಗೊಂಡಿರುವ ಹಾಕಿ ಟರ್ಫ್ ನ ಕಾಮಗಾರಿಯನ್ನು ಪರಿಶೀಲಿಸಿದರು. ಶಾಲೆ ಆವರಣದಲ್ಲಿ ಅಡ್ಡಾಡಿದ ಶಾಸಕರು ಶಾಲೆಯ ವ್ಯವಸ್ಥೆಗಳನ್ನು ಪರೀಕ್ಷಿಸಿದರು. ಬಾಲಕಿಯರು ವಸತಿಗೃಹಗಳಿಗೆ ತೆರಳುವ ಮಾರ್ಗದ ಗೇಟ್ ಮುರಿದು ಹೋಗಿರುವುದನ್ನು ಗಮನಿಸಿದ ಶಾಸಕರು ಕೂಡಲೆ ಸರಿಪಡಿಸಲು ಕ್ರಮಕೈಗೊಳ್ಳುವಂತೆ ವಾರ್ಡನ್‌ಗೆ ಸೂಚಿಸಿದರು ಹಾಕಿ ಟರ್ಫ್ ಸುತ್ತಲೂ ಬೆಳೆದಿರುವ ನಿಂತಿರುವ ಹುಲ್ಲುಗಾವಲನ್ನು ಸ್ವಚ್ಚಗೊಳಿಸಲು ತಿಳಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಹಾಕಿ ಟರ್ಫ್ ಕಾಮಗಾರಿಯು ಶೇ.೯೫ ಭಾಗದಷ್ಟು ಪೂರ್ಣಗೊಂಡಿದೆ. ನೀರಿನ ವ್ಯವಸ್ಥೆ ಮತ್ತು ವಿದ್ಯುತ್ ವ್ಯವಸ್ಥೆಗಳನ್ನು ಶೀಘ್ರವಾಗಿ ಸರಿಪಡಿಸಲು ಅಧಿಕಾರಿ ಸೂಚನೆ ನೀಡಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಬಳಕೆಗೆ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಜಿಲ್ಲಾ ಪಂಚಾಯ್ತಿ ಸದಸ್ಯೆ ಮಂಜುಳ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಗಣೇಶ್, ಸಬಿತ ಚೆನ್ನಕೇಶವ, ಗ್ರಾಮ ಪಂಚಾಯತಿ ಸದಸ್ಯರುಗಳಾದ ಕೆ ಕೆ ಭೋಗಪ್ಪ, ಮಂಜುನಾಥ, ಭಾಸ್ಕರ್ ನಾಯಕ ಮತ್ತಿತರರು ಇದ್ದರು.

Open chat