Coorgcitizen

ಕುಶಾಲನಗರ ನೂತನ ತಾಲೂಕು ಅಧಿಕೃತ ಘೋಷಣೆಯಾದ ಹಿನ್ನಲೆಯಲ್ಲಿ ಕುಶಾಲನಗರ ಬಿಜೆಪಿ ವತಿಯಿಂದ ಸಂಭ್ರಮಾಚರಣೆ ನಡೆಯಿತು. ಗಣಪತಿ ದೇವಾಲಯ ಮುಂಭಾಗ ಸೇರಿದ ಪಕ್ಷದ ಪ್ರಮುಖರು, ಕಾರ್ಯಕರ್ತರು ರಾಜ್ಯ ಸರಕಾರ ಮತ್ತು ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಪರ ಜಯಘೋಷ ಕೂಗಿ ಪರಿಸ್ಪರ ಸಿಹಿ ಹಂಚಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಹಿರಿಯ ಮುಖಂಡ ಜಿ.ಎಲ್ ನಾಗಾರಾಜ್, ಕುಶಾಲನಗರ ಪ.ಪಂ ಅಧ್ಯಕ್ಷರಾದ ಜಯವರ್ಧನ್, ಕುಶಾಲನಗರ ತಾಲೂಕಾಗಲು ಹೋರಾಟ ನಡೆಸಿದ ಎಲ್ಲ ಸಂಘಟನೆಗಳಿಗೆ ಧನ್ಯವಾದ ತಿಳಿಸಿದರು. ಕುಶಾಲನಗರ ತಾಲೂಕನ್ನು ಕರ್ನಾಟಕ ರಾಜ್ಯದಲ್ಲೆ ಮಾದರಿ ತಾಲೂಕಾಗಿ ಮಾಡಲು ಪ್ರತಿಯೊಬ್ಬರೂ ಪಣತೊಡಬೇಕಿದೆ ಎಂದರು.

ಈ ಸಂದರ್ಭ ಪಪಂ ಸದಸ್ಯ ಬಿ.ಅಮೃತ್ ರಾಜ್, ಎಂ.ವಿ.ನಾರಾಯಣ್, ಕುಡಾ ಅಧ್ಯಕ್ಷ ಎಂ.ಎಂ.ಚರಣ್, ಸದಸ್ಯರಾದ ವೈಶಾಖ್, ಪುಂಡರೀಕಾಕ್ಷ, ನಗರ ಬಿಜೆಪಿ ಅಧ್ಯಕ್ಷ ಉಮಾಶಂಕರ್, ಪ್ರಮುಖರಾದ ಶಿವಾಜಿ, ಎಂ.ಡಿ.ಕೃಷ್ಣಪ್ಪ, ಕುಮಾರಪ್ಪ ಮತ್ತಿತರರು ಇದ್ದರು.

Open chat