Coorgcitizen

ಕೊರೋನಾ ಸಮಯದಲ್ಲಿ ಹೊಸ ಕಾರು ಖರೀದಿಸುವುದು ಸ್ವಲ್ಪ ಕಷ್ಟ. ಆದರೆ ರೆನಾಲ್ಟ್ ಕಂಪನಿ ಕಾರು ಖರೀದಿಸಬೇಕೆಂಬವರಿಗಾಗಿ ಕಡಿಮೆ ಬೆಲೆಯ ಇಎಂ​ಐ ಆಯ್ಕೆಯನ್ನು ನೀಡುತ್ತಿದೆ. ಶೇ 7ರಷ್ಟು ಬಡ್ಡಿ ಮತ್ತು ತಿಂಗಳಿಗೆ 4,327 ರೂ ಪಾವತಿಸುವ ಮೂಲಕ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಲು ಮುಂದಾಗಿದೆ. 7 ವರ್ಷದ ಇಎಂ​ಐ​ಐ ಸೇವೆಯನ್ನು ಒದಗಿಸುತ್ತಿದೆ.

ಅಂದಹಾಗೆಯೆ, ಎಸ್​ಬಿಐ ಖಾತೆಯ ಮೂಲಕ ಇಎಂ​ಐ ಆಯ್ಕೆಯನ್ನು ನೀಡುತ್ತಿದೆ. ಪ್ರತಿದಿನ 144.23 ರೂ ಕಂತಿನಂತೆ ಈ ಸೇವೆಯನ್ನು ನೀಡುತ್ತಿದೆ. ಪ್ರತಿದಿನ 144.23 ರೂ ನೀಡುವ ಮೂಲಕ ರೆನಾಲ್ಟ್ ಕ್ವಿಡ್​​ ಖರೀದಿಸಿ!

ಮೈಲೇಜ್​ ವಿಷಯದಲ್ಲಿ ರೆನಾಲ್ಟ್​ ಕ್ವಿಡ್​ ಶಕ್ತಿಶಾಲಿ ಕಾರು. ಈ ಕಾರಿನ ದೆಹಲಿ ಎಕ್ಸ್​ ಶೋ ರೂಂ ಬೆಲೆ 2,99,800 ರೂ ಆಗಿದೆ. ಆದರೆ ರಸ್ತೆ ಇಳಿದಾಗ ಈ ಕಾರಿನ ಬೆಲೆ 3,29,835 ರೂ ಆಗುತ್ತದೆ. 11,992 ಆರ್​ಟಿಒ ಮತ್ತು 18,043 ಇನ್ಸೂರೆನ್ಸ್​ ಇರಲಿದ್ದು, ಗ್ರಾಹಕರು ಈ ಕಾರನ್ನು 50 ಸಾವಿರಕ್ಕೆ ಖರೀದಿಸಬಹುದಾಗಿದೆ. ದಿನಕ್ಕೆ 144.23 ರೂ ಇಎಂ​ಐ ಪಾವತಿಸುವ ಮೂಲಕ ತನ್ನದಾಗಿಸಿಕೊಳ್ಳಬಹುದಾಗಿದೆ.

7 ವರ್ಷದ ಇಎಂ​ಐ ಆಯ್ಕೆ!

ರೆನಾಲ್ಟ್​​ ಕ್ವಿಡ್​​ ಕಾರಿನ ಮೇಲೆ 7 ವರ್ಷ ಇಎಂ​ಐ ಆಯ್ಕೆಯನ್ನು ನೀಡುತ್ತಿದೆ. ಶೇ. 7.75ರಷ್ಟು ಬಡ್ಡಿಯನ್ನು ಮತ್ತು ತಿಂಗಳಿಗೆ 4,327 ರೂ ಪಾವತಿಸಬೇಕಿದೆ.

ರೆನಾಲ್ಟ್​ ಕ್ವಿಡ್​​ 0.8 ಲೀಟರ್​ ಮತ್ತು 1 ಲೀಟರ್​ ಎಂಜಿನ್​ ಆಯ್ಕೆಯಲ್ಲಿ ಸಿಗಲಿದೆ. 0.8 ಲೀಟರ್​​ ಎಂಜಿನ್​ ಕಾರು 54ಪಿಎಸ್​​ ಪವರ್​ 5600 ಆರ್​ಪಿಎಮ್​ ಹಾಗೂ 72 ಎನ್​ಎಮ್​ ಟಾರ್ಕ್​ ಉತ್ಪಾದಿಸುತ್ತದೆ.
ಇನ್ನು 1 ಲೀಟರ್​ ಎಂಜಿನ್​ 68 ಪಿಎಸ್​​ ಪವರ್​ 5500 ಆರ್​ಪಿಎಮ್​ ಮತ್ತು 91 ಎನ್​ಎಮ್​​ ಟಾರ್ಕ್​ 4250 ಆರ್​ಪಿಎಮ್​ ಉತ್ಪಾದಿಸುತ್ತದೆ.

Open chat